
ತುಮಕೂರು ನಗರಕ್ಕೆ ಸಮೀಪ ಇರುವ ಬೆಳಗೊಂಬ ನಿವಾಸಿ ಇತ್ತೀಚೆಗಷ್ಟೇ ರೌಡಿಶೀಟರ್ನಿಂದ ಹೊರ ಬಂದಿದ್ದ ಮಲ್ಲ ಅಲಿಯಾಸ್ ವೀರಣ್ಣ (೩೮) ಎಂಬಾತನ ಮೇಲೆ ನಾಲ್ಕೈದು ಮಂದಿ ಹಳೆ ದ್ವೇಷದ ಹಿನ್ನೆಲೆ ಹಾಗೂ ಯುವತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಟ್ಟಿಗೆದ್ದು ಮಾರಕಾಸ್ತ್ರಗಳಿಂದ ಟೀ ಅಂಗಡಿ ಬಳಿ ಅಟ್ಯಾಕ್ ಮಾಡಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಲ್ಲ ಹಲವು ಕೇಸುಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸುವೆ. ಬೆಳಗುಂಬ ಸಮೀಪವಿರುವ ಗರುಡ ಕೆಫೆ ಬಳಿ ರಾತ್ರಿ ಈ ದುರ್ಘಟನೆ ನಡೆದಿದ್ದು ಕೆಲ ತಿಂಗಳ ಹಿಂದಷ್ಟೇ ರೌಡಿಶೀಟರ್ ನಿಂದ ಪೊಲೀಸರು ಈತನ ಹೆಸರನ್ನು ಕೈ ಬಿಟ್ಟಿದ್ದರೆನ್ನಲಾಗಿದೆ. ಕ್ಯಾತ್ಸಂದ್ರ ಮತ್ತು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಪೊಲೀಸರ ತನಿಖೆಯಿಂದಷ್ಟೇ ಕೊಲೆ ಏಕೆ ನಡೆಯಿತು ಎಂಬುದು ತಿಳಿಯಬೇಕಿದೆ. ಕೊಲೆ ಇನ್ನಿತರ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದನೆನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆನ್ನಲಾಗಿದೆ.
