ತುಮಕೂರು ಪೊಲೀಸ್ ಅಧಿಕಾರಿ ಹೆಸರು? ನಾಲ್ಕೈದು ಜೂಜು ಅಡ್ಡಗಳು – ಹಿರಿಯ ಪೊಲೀಸ್ ಅಧಿಕಾರಿ ಗಳ ಮೌನ

ತುಮಕೂರು: ತಾಲೂಕಿನ ಬೆಳ್ಳಾವಿ ಪೊಲೀಸ್ ಠಾಣೆ, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ, ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ನಾಲ್ಕೈದು ಜೂಜು ಅಡ್ಡೆಗಳನ್ನು ರಾಜಕೀಯ ಮುಖಂಡರುಗಳು ಪ್ರತಿನಿತ್ಯ ನಡೆಸುತ್ತಿದ್ದಾರೆ ಎಂದು ದೂರುಗಳು ಬಂದರು ಹಿರಿಯ ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಏಕೆ??

ಪ್ರತಿನಿತ್ಯ ಜೂಜು ಅಡ್ಡೆಗಳ ಜಾಗ ಬದಲಾಯಿಸಿಕೊಂಡು ಆಡಿಸಿ ಎಂದು ಮೂರ್ನಾಲ್ಕು ರಾಜಕೀಯ ಮುಖಂಡರುಗಳಿಗೆ ಪೊಲೀಸ್ ಅಧಿಕಾರಿ ಸ್ಕೆಚ್ ಹಾಕಿ ಕೊಟ್ಟಿದ್ದಾರಂತೆ!! ಅವರ ಬಳಿ ತಮ್ಮ ಶಿಷ್ಯರನ್ನು ಬಿಟ್ಟು ಇಂತಿಷ್ಟು ಹಣ ಎಂದು ಪ್ರತಿನಿತ್ಯ ಲಕ್ಷ್ಮಿ ಪ್ರಸಾದ ಪಡೆದುಕೊಳ್ಳುತ್ತಿದ್ದರಂತೆ? ಪ್ರತಿನಿತ್ಯ ತುಮಕೂರು ಜಿಲ್ಲೆ ಅಲ್ಲದೆ ಬೇರೆ ಕಡೆಯಿಂದಲೂ ವಾಹನಗಳಲ್ಲಿ ಬಂದು ಜೂಜಾಟದಲ್ಲಿ ಲಕ್ಷಾಂತರ ರು ಪಣಕ್ಕಿಟ್ಟು ಕಳೆದುಕೊಳ್ಳುತ್ತಿದ್ದಾರೆಂದು ಪೊಲೀಸ್ ಮೂಲ ಗಳಲ್ಲೇ ಮನೆ ಮಾತಾಗಿದೆ.

ಜೂಜು ಅಡ್ಡೆಗಳ ಜಾಗ ಪ್ರತಿನಿತ್ಯ ಬದಲಾವಣೆ ಆದಂತೆ ಜೂಜಾಟ ಆಡಿಸುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ ಅದರ ಜೊತೆಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಶಾ ಮಿಲ್ ಆಗಿರುವುದರಿಂದ ಜೂಜಾಟವಾಡುವ ತಂಡಗಳ ಮೇಲೆ ದಾಳಿ ನಡೆಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಆಗುತ್ತಿಲ್ಲವೆನ್ನಲಾಗಿದೆ!! ಕೇಂದ್ರ ವಲಯ ಐಜಿಪಿ ಸಾಹೇಬರಿಗೆ ವಿಷಯ ಮುಟ್ಟಿದ್ದು ಸದ್ಯದಲ್ಲೇ ದಾಳಿ ನಡೆಸಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಕ್ಕ ಶಿಕ್ಷೆಗೆ ಒಳಪಡಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ವಲಯದಲ್ಲಿ ಕೇಳಿ ಬರುತ್ತಿದೆ.