
ಲಂಚ ಪಡೆದ ವಿಎ ಎಸಿಬಿ ಬಲೆಗೆ
ತುಮಕೂರು: ವ್ಯಕ್ತಿಯೊಬ್ಬರಿಗೆ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಎಂಟು ಸಾವಿರ ರೂ ಲಂಚ ಪಡೆದು ಗ್ರಾಮ ಲೆಕ್ಕಿಗರಿಗೆ ನೀಡಿದ ಗ್ರಾಮಸಹಾಯಕ ಮತ್ತು ಗ್ರಾಮಲೆಕ್ಕಿಗರು ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಭೀಮಸಂದ್ರ ವ್ಯಕ್ತಿಯೊಬ್ಬ ರಿಂದ ತುಮಕೂರು ಕಸಬಾ R I ಕಚೇರಿ ಬಳಿ ಹೆಗ್ಗೆರೆ ಗ್ರಾಮಸಹಾಯಕ ಎಚ್ ಎನ್ ಪ್ರಕಾಶ್ ಎಂಟು ಸಾವಿರ ರೂ ಪಡೆದು ಗ್ರಾಮ ಲೆಕ್ಕಾಧಿಕಾರಿ ರಶ್ಮಿ ಎಂಬುವರಿಗೆ ನೀಡಿದರು. ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಇನ್ಸ್ ಪೆಕ್ಟರ್ ಗಳಾದ ವೀರೇಂದ್ರ, ವಿಜಯಲಕ್ಷ್ಮಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ,
ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡಲು 12000 ಲಂಚ ಕೇಳಿದ ರೆನ್ನಲಾಗಿದೆ. ಆ ಪೈಕಿ 8 ಸಾವಿರ ರೂ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.