
ಹಾಡುಹಗಲೇ ಪತ್ನಿಯಿಂದಲೇ ಪತಿ ಕೊಲೆ
ತುಮಕೂರು: ಗಂಡ ಹೆಂಡತಿ ಜಗಳ ಅತಿರೇಕಕ್ಕೆ ಹೋಗಿ ಸಿಟ್ಟಿಗೆದ್ದ ಪತ್ನಿ ಪತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಇಂದು ಮಧ್ಯಾಹ್ನ ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.
ನಗರದ ಬಡ್ಡಿಹಳ್ಳಿ ವಾಸಿ ನಾರಾಯಣ (45) ಎಂಬಾತನೇ ಕೊಲೆಯಾಗಿರುವ ದುರ್ದೈವಿ, ಮೃತ ನಾರಾಯಣ ನೆಲಮಂಗಲ ಬಳಿಯ ಕಿಂಗ್ಫಿಶರ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆನ್ನಲಾಗಿದೆ. ಭಾನುವಾರ ಮಧ್ಯಾಹ್ನ ಬಡ್ಡಿಹಳ್ಳಿ ಬಡಾವಣೆಯ ತನ್ನ ಮನೆಯಲ್ಲಿ ನಾರಾಯಣ ಪತ್ನಿ ಅನ್ನಪೂರ್ಣಮ್ಮ ರೊಂದಿಗೆ ಜಗಳ ಪ್ರಾರಂಭವಾಗಿದ್ದು ಅದು ಅತಿರೇಕಕ್ಕೆ ಹೋಗಿದೆ, ಸಿಟ್ಟಿಗೆದ್ದ ಅನ್ನಪೂರ್ಣಮ್ಮ ಗಂಡನ ಮೈಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾರೆ ಗಾಯಾಳು ಮನನೊಂದು ಮನೆಯಿಂದ ಹೊರಗಡೆ ಬಂದು ಬಿದ್ದಾಗ ಪಕ್ಕದಲ್ಲೇ ಇದ್ದ ಕಲ್ಲನ್ನು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಕಾರಣವೇ ಜಗಳಕ್ಕೆ ಮೂಲ ಕಾರಣವೆನ್ನಲಾಗಿದೆ.
ಮೃತ ನಾರಾಯಣನಿಗೆ 3 ಮಕ್ಕಳಿದ್ದಾರೆ. ಘಟನೆಯ ಸುದ್ದಿ ತಿಳಿದಕೂಡಲೇ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರುವಶಕ್ಕೆ ತೆಗೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.