
ಕೊರಟಗೆರೆ ತಾಲೂಕು ಕಛೇರಿ ಗುಮಾಸ್ತ ಎಸಿಬಿ ಬಲೆಗೆ
ಕೊರಟಗೆರೆ : ಕೊರಟಗೆರೆ ತಾಲೂಕು ಕಛೇರಿ ಕೋರ್ಟ್ ಕೇಸ್‍ನ ಗುಮಾಸ್ತ ಲಂಚ ಪಡೆಯುವ ವೇಳೆ ತುಮಕೂರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಬುದುವಾರ ಸಂಜೆ ನಡೆದಿದೆ.
ತಾಲೂಕಿನ ಚಿನ್ನರಾಯನದುರ್ಗ ಹೋಬಳಿಯ ಕಲ್ಲುಗುಟ್ಟರಹಳ್ಳಿ ಗ್ರಾಮವಾಸಿ ಶ್ರೀನಿವಾಸ್ ರವರಿಗೆ ಸಂಬಂದಿಸಿದ ಕಲ್ಲುಗುಟ್ಟರಹಳ್ಳಿ ಸರ್ವೇ ನಂಬರ್ 26/5 ಮತ್ತು ಬಳೇವೀರನಹಳ್ಳಿ ಸರ್ವೇ ನಂಬರ್ 9/5 ರ ಜಮೀನಿನ ತಕರಾರು ವ್ಯಾಜ್ಯವು ತಾಹಶೀಲ್ದಾರ್ ಕೊರ್ಟ್‍ನಲ್ಲಿ ನಡೆಯುತ್ತಿದ್ದು, ಈ ಸಂಬಂಧ ತಾಲೂಕು ಕಛೇರಿಯಲ್ಲಿ ಕೋರ್ಟ್ ಕೇಸ್ ಪ್ರಕರಣಗಳ ಗುಮಾಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಸಿ.ಕೆ.ಎನ್.ಸ್ವಾಮಿ, ಶ್ರೀನಿವಾಸ್ ರವರಿಗೆ ಪ್ರಕರಣ ಮುಕ್ತಾಯಗೊಳಿಸಿ ಖಾತೆ ಮಾಡಿಸಿ ಕೊಡುವುದಾಗಿ ಹೇಳಿ 20 ಸಾವಿರ ರೂಗಳ ಲಂಚದ ಬೇಡಿಕೆ ಇಟ್ಟಿದ್ದ, ಇದರ ದೂರಿನ ಅನ್ವಯ ತುಮಕೂರು ಎಸಿಬಿ ಪೊಲೀಸರು ಪಟ್ಟಣದ ತಾಲೂಕು ಕಛೇರಿ ಮುಂಭಾಗದ ವಡ್ಡಗೆರೆ ರಸ್ತೆಯ ಕಂಠಪ್ಪ ಟೀ ಸ್ಠಾಲ್ ಬಳಿ ಗುಮಾಸ್ತ ಸ್ವಾಮಿ ಶ್ರೀನಿವಾಸ್ ರವರಿಗೆ ಮೊದಲ ಕಂತ್ತಿನ 10ಸಾವಿರ ಹಣವನ್ನು ರವಿಕಿರಣರವರ ಕೈಗೆ ಕೊಡಿಸಿ ಅವರಿಂದ ಲಂಚದ ಹಣ ಪಡೆಯುವಾಗ ಎಸಿಬಿ ರವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂದ ತುಮಕೂರು ಎಸಿಬಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೊರಟಗೆರೆ ತಾಲೂಕಿನಲ್ಲಿ ಕಳೆದ 3 ತಿಂಗಳಿನಿಂದ ಎಸಿಬಿ ಬಲೆಗೆ 7 ನೇ ಪ್ರಕರಣ ಇದಾಗಿದೆ. ಈ ದಾಳಿಯಲ್ಲಿ ತುಮಕೂರು ಎಸಿಬಿ ಡಿವೈಎಸ್ಪಿ ಎಸ್.ಮಲ್ಲಿಕಾರ್ಜುನಚಿಕ್ಕಿ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಎಸ್.ವಿಜಯಲಕ್ಷ್ಮಿ, ಎನ್.ವೀರೇಂದ್ರ, ಸಿಬ್ಬಂದಿಗಳಾದ ಬಿ.ನರಸಿಂಹರಾಜು ಶಿವಣ್ಣ, ಚಂದ್ರಶೇಖರ್, ನರಸಿಂಹರಾಜು, ಗಿರೀಶ್, ಕುಮಾರ್, ಯಶೋಧ, ಮಹೇಶ್ ಕುಮಾರ್ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು.