
ನಗರದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಪೊಲೀಸರಿಂದ ನಿತ್ಯ ವಾಹನ ಸವಾರಿಗೆ ಕಿರಿಕಿರಿ
ತುಮಕೂರು : ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯಿಂದ ಬಹುತೇಕ ರಸ್ತೆ ಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.ನಗರದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ ಹಾಗೂ ಡಾ. ರಾಧಾಕೃಷ್ಣನ್ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ವಾಹನ ನಿಲುಗಡೆಯ ವ್ಯವಸ್ಥೆ ಅವ್ಯವಸ್ಥೆ ಯಿಂದ ಕೂಡಿದ್ದು ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಎರಡು ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಗೊಂದಲ ಮೂಡಿಸುತ್ತದೆ.ಮೊದಲಿಗೆ ಕಾರ್ ನಿಲುಗಡೆ ಫಲಕ ಅಳವಡಿಸಲಾಗಿದೆ ಅದಾದ ಸ್ವಲ್ಪ ದೂರದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಫಲಕ ಅಳವಡಿಸಲಾಗಿದೆ ಅದೇರೀತಿ ರಸ್ತೆ ಉದ್ದಕ್ಕೂ ಎರಡು ಬದಿ ವಾಹನ ನಿಲುಗಡೆ ಫಲಕ ಅಳವಡಿಸಲಾಗಿದೆ ಇದರಿಂದ ಕಾರ್ ನಿಲುಗಡೆಗೂ ಅವಕಾಶ ಆಗುತ್ತಿಲ್ಲ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ವಾಗುತ್ತಿಲ್ಲ ಕಾರಣ ನಿಲುಗಡೆ ಪ್ರದೇಶಗಳು ಅತಿ ಕಿರಿದಾಗಿವೆ ಈ ರೀತಿ ವಾಹನ ನಿಲುಗಡೆ ಫಲಕಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿದವರು ಯಾರು...? ಅನುಮತಿ ಕೊಟ್ಟವರು ಯಾರು...? ನಿಯಾಮಾನುಸಾರ ಯಾವುದೇ ಒಂದು ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಇಂತಿಷ್ಟು ಪ್ರದೇಶವೆಂದು ಸೀಮಿತಗೊಳಿಸಿ ಆ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಬೇಕೆಂದು ಜಿಲ್ಲಾ ದಂಡಾಧಿಕಾರಿ ಅವರು ನೋಟಿಫಿಕೇಶನ್ ಮಾಡಬೇಕು ಆ ನೋಟಿಫಿಕೇಶನ್ ಸಾರಿಗೆ ಆಯುಕ್ತರಿಗೆ ಕಳುಹಿಸಬೇಕು ಸಾರಿಗೆ ಆಯುಕ್ತರು ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿ ನಂತರ ಗೆಜೆಟ್ ನೋಟಿಫಿಕೇಶನ್ ಮಾಡಲಾಗುತ್ತದೆ ಆದ ಮೇಲೆ ಅದು ಅಧಿಕೃತ ಎಂಬ ನಿಯಮವಿದೆ ಇದನ್ನು ಮೀರಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ ಯಲ್ಲಿ ಮನಸೋಯಿಚ್ಚೆ ವಾಹನ ನಿಲುಗಡೆ ಫಲಕಗಳನ್ನು ಅಳವಡಿಸಲಾಗಿದೆ ಇದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಪೋಲಿಸರ ಕಾಟದಿಂದ ಬೇಸತ್ತು ಹೋಗಿದ್ದಾರೆ. ಈ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅಧಿಕೃತವಾಗಿ ನೋಟಿಫಿಕೇಶನ್ ಆಗಿದೆಯಾ... ಮೊದಲು ಅದನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಬೇಕು... ಏಕೆಂದರೆ ಈ ಹಿಂದೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಆಲ್ಟರ್ನೇಟಿವ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು ಆದಿನಗಳಲ್ಲಿ ವಾಹನ ನಿಲುಗಡೆಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿದ ನಂತರ ಮನಸೋಇಚ್ಛೆ ವಾಹನ ನಿಲುಗಡೆ ಫಲಕಗಳನ್ನು ಅಳವಡಿಸಿರುವ ಬಗ್ಗೆ ನಾಗರಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರು ಸಂಬಂಧಪಟ್ಟ ಪೊಲೀಸ್ ಇಲಾಖೆಯಲ್ಲಿ ಪಾಲಿಕೆ ಆಯುಕ್ತರಾಗಲ್ಲಿ ನಗರ ಶಾಸಕರಾಗಲಿ ಯಾರೂ ಕಿಂಚಿತ್ತು ಈ ಬಗ್ಗೆ ಗಮನಹರಿಸುತ್ತಿಲ್ಲ. ನಿತ್ಯ ವಾಹನ ಸವಾರರು ಪೊಲೀಸರ ಟೋಯಿಂಗ್ ವೆಹಿಕಲ್ ಹಾಗೂ ಕಾರ್‌ಗೆ ವೀಲ್ ಲಾಕ್ ಮಾಡುವುದರಿಂದ ನಿತ್ಯ ದಂಡ ತೆತ್ತು ಹಿಡಿಶಾಪ ಹಾಕುತ್ತಿದ್ದಾರೆ. ಅದೇರೀತಿ ಡಾ. ರಾಧಾಕೃಷ್ಣನ್ ರಸ್ತೆ ಯಲ್ಲಿ ರಸ್ತೆಒಂದು ಬದಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ಇಲ್ಲಿ ಯಾವುದೇ ಕಿರಿಕಿರಿ ಆಗುತ್ತಿಲ್ಲ. ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯಲ್ಲಿ ಮಾತ್ರ ಈ ಅವ್ಯವಸ್ಥೆ ಆಗಲು ಕಾರಣವೇನು...! ಎಂಬುದನ್ನ ವಾಹನ ನಿಲುಗಡೆ ಸರಿಯಾಗಿ ಮಾಡಿಲ್ಲವೆಂದು ದಂಡ ಹಾಕುವ ಪೊಲೀಸ್ ಅಧಿಕಾರಿಗಳೇ ಸ್ಪಷ್ಟಪಡಿಸಬೇಕು. ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಜನ ಪ್ರಿಯ ವಾಗಬಾರದು. ಅವರು ಮಾಡುವ ಕಾರ್ಯ ಜನಪ್ರಿಯ ವಾಗಬೇಕು ಎಂಬುದನ್ನ ಪೊಲೀಸ್ ಅಧಿಕಾರಿಗಳು ಮರೆಯಬಾರದು...