Date Time: 09-06-2023 16:26

ಮಾಂಗಲ್ಯ ಕಸಿದು ಮಹಿಳೆಯ ಕೊಲೆ

 

 ತುಮಕೂರು: ದನ ಮೇಯಿಸಲು ಬೆಟ್ಟದ ಬುಡಕ್ಕೆ ಹೋಗಿದ್ದ ಮಹಿಳೆಯನ್ನು ಯಾರೋ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಪ್ರತಿದಿನದಂತೆ ನಿನ್ನೆಯೂ ಸಹ ದನ ಮೇಯಿಸಲು ಚೋಟ ಸಾಬರ ಪಾಳ್ಯದ ಬಳಿಯಿರುವ ಬೆಟ್ಟಕ್ಕೆ ಜಯಲಕ್ಷ್ಮಿ ಎಂಬಾಕೆ ತೆರಳಿದ್ದಾರೆ. ಸಂಜೆಯಾದರೂ ಆಕೆ ಮನೆಗೆ ಬರದಿದ್ದಾಗ ಪತಿ ಶಿವಕುಮಾರ್ ಹುಡುಕಿಕೊಂಡು ಹೋಗಿದ್ದಾರೆ. ಬೆಟ್ಟದ ಬಳಿ ಆಕೆಯ ಶವ ಬಿದ್ದಿದೆ ಎನ್ನಲಾಗಿದೆ.  ಮಾಂಗಲ್ಯ ಕಸಿದುಕೊಂಡು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದೆಂದು ಜನರು ಶಂಕಿಸಿದ್ದಾರೆ  ಯಾದರು ಪೊಲೀಸ್ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿಗಿದೆ . ಘಟನೆ ನಡೆದ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ತೆರಳಿದ್ದು ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್. ಅಡಿಷನಲ್ ಎಸ್ಪಿ ಉದೇಶ್ ನಗರ ಡಿವೈಎಸ್ಪಿ ಹೆಚ್ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 ನಿನ್ನೆ ಮಧ್ಯಾಹ್ನ ಈ ಘಟನೆ  ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Popular Posts