ಲಂಚ ಸ್ವೀಕಾರ ಗ್ರಾಪಂ ಕಾರ್ಯದರ್ಶಿ ಎಸಿಬಿ ಬಲೆಗೆ
ಕೊರಟಗೆರೆ: ವ್ಯಕ್ತಿಯೊಬ್ಬರಿಂದ ಖಾತೆ ಮಾಡಿಕೊಡಲು ಗ್ರಾಪಂ ಕಾರ್ಯದರ್ಶಿ 3500 ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಾಲೂಕಿನ ಕೊಳಲ ಗ್ರಾಮ ಪಂಚಾಯತ್ ಕಾರ್ಯದರ್ಶಿ ತಿಮ್ಮಯ್ಯ ಎಂಬುವರೇ ಎಸಿಬಿ ಬಲೆಗೆ ಬಿದ್ದಿರುವ ವ್ಯಕ್ತಿ. ಎಸಿಬಿ ಡಿವೈಎಸ್ಪಿ ಮಂಜುನಾಥ್. ಇನ್ಸ್ ಪೆಕ್ಟರ್ ಗಳಾದ ವಿಜಯಲಕ್ಷ್ಮಿ, ವೀರೇಂದ್ರ ಮತ್ತು ಸಿಬ್ಬಂದಿ ವರ್ಗ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ತಿಳಿದುಬಂದಿದೆ.